ಗುರುರಾಯರ 354ನೇ ಆರಾಧನಾ ಸಪ್ತರಾತ್ರೋತ್ಸವ ಮಹೋತ್ಸವದ "ಉದ್ಘಾಟನೆ
ಗುರುರಾಯರ 354ನೇ ಆರಾಧನಾ ಸಪ್ತರಾತ್ರೋತ್ಸವ ಮಹೋತ್ಸವದ "ಉದ್ಘಾಟನೆ"
ಬೆಂಗಳೂರು : 'ಕಲಿಯುಗ ಕಾಮಧೇನು ' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವನ್ನು ವೈಭವದಿಂದ ಆಚರಿಸಲು ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಈ ಕಾರ್ಯಕ್ರಮದ "ಉದ್ಘಾಟನೆ" ಕಾರ್ಯಕ್ರಮದ ಅಂಗಗಾಗಿ ಉಡುಪಿಯ ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ"ಉದ್ಘಾಟನೆ"ಗೊಂಡು ಆರಾಧನಾ ಮಹೋತ್ಸವದ ಅಂಗವಾಗಿ ಗೋಪೂಜೆ ಧ್ವಜಾರೋಹಣ ಧನ ದಾನ್ಯಪೂಜೆ ಶ್ರೀ ಲಕ್ಷ್ಮೀ ಪೂಜೆ ಹಾಗೂ ಗುರುರಾಯರ ಉತ್ಸವಕ್ಕಾಗಿ ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣದ ರಥದ ನಿರ್ಮಾಣದ ಕಾರ್ಯಕ್ಕೆ ಗುರು ರಾಯರ ಪ್ರೇರಣೆ ಮತ್ತು ಪರಮ ಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಸಂಕಲ್ಪಾನುಸಾರ ಭಕ್ತರೋಬ್ಬರಿಂದ (ಬಂಗಾರದ) ಸುವರ್ಣ ರಥದ ನಿರ್ಮಾಣಕ್ಕೆ ಕಟ್ಟಿಗೆಯ ರಥದ ಸಂಪೂರ್ಣ ಸೇವೆಯನ್ನು ರಾಯರ ಸೇವೆಗಾಗಿ ಕಟ್ಟಿಗೆಯ ರಥವನ್ನು ಈ ದಿನ ಸಾಂಕೇತಿಕವಾಗಿ ಗುರು ರಾಯರಿಗೆ ಸಮರ್ಪಿಸಲಾಯಿತು ಈ ಸಂದರ್ಭದಲ್ಲಿ ಆರ್ ಕೆ ವಾದಿಂದ್ರ ಆಚಾರ್ಯ ಶ್ರೀ ಕೃಷ್ಣ ಗುಂಡಾ ಆಚಾರ್ಯ ಶ್ರೀ ನಂದಕಿಶೋರ್ ಆಚಾರ್ಯ,ಅರ್ಚಕ ವೃಂದದವರು ಮತ್ತು ಡಾಕ್ಟರ್ ರಾಯಚೂರು ಶೇಷಗಿರಿದಾಸ್ ಅಸ್ಗೋಡು ಜಯಸಿಂಹ , ಶ್ರೀ ಕೃಷ್ಣಮೂರ್ತಿ ಭಟ್ ಹಲವಾರು ಗಣ್ಯರು ಭಕ್ತರು ಸಿಬ್ಬಂದಿಗಳು ಸೇವಾಕರ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು
Comments
Post a Comment