ಗುರು ಪೂರ್ಣಿಮೆ ಪ್ರಯುಕ್ತ ಶ್ರೀ ಗುರುರಾಯರ ದರ್ಶನ ಪಡೆಯಲು ಸಹಸ್ರಾರು ಭಕ್ತರ ಆಗಮನ
ಗುರು ಪೂರ್ಣಿಮೆ ಪ್ರಯುಕ್ತ ಶ್ರೀ ಗುರುರಾಯರ ದರ್ಶನ ಪಡೆಯಲು ಸಹಸ್ರಾರು ಭಕ್ತರ ಆಗಮನ
ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಗುರುಪೌರ್ಣಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಏರ್ಪಡಿಸಿತ್ತು.
ಬೆಳಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಅನ್ನದಾನ ಸೇವೆಗಳು ಜರುಗಿದವು.
ಬೆಳಗ್ಗೆ ಐದು ಗಂಟೆಯಿಂದಲೇ ಭಕ್ತಾದಿಗಳು ಗುರುಗಳ ದರ್ಶನಕ್ಕೆ ಬರಲು ಆರಂಭಿಸಿದರು. ಮಧ್ಯಾಹ್ನ ಮೂರು ಗಂಟೆಯವರೆಗೂ ಸುಮಾರು 10,000 ಸಾವಿರ ಹೆಚ್ಚಿನ ಭಕ್ತಾದಿಗಳು ಸೇರಿ ಗುರುಗಳ ದರ್ಶನ ಪಡೆದು ಅವರ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು ಗುರುಗಳ ದರ್ಶನಕ್ಕೆ ಆಗಮಿಸಿದ ಭಕ್ತರ ಕ್ಷೇಮಕ್ಕಾಗಿ ಸ್ವಪ್ರೇರಣೆಯಿಂದ ಜಯನಗರದ ಪೊಲೀಸ್ ಸಿಬ್ಬಂದಿ ಹಾಗೂ ಜೆಪಿ ನಗರದ ಪೊಲೀಸ್ ಸಿಬ್ಬಂದಿ ವರ್ಗದವರು ಕೂಡ ಆಗಮಿಸಿ ಶ್ರೀ ಮಠದ ಸಹಕಾರದೊಂದಿಗೆ ಶ್ರೀ ಗುರು ಯರಾಯರ ಸೇವೆಯಲ್ಲಿ ಭಾಗವಹಿಸಿ ಭಕ್ತರಿಗೂ, ಗಣ್ಯರಿಗೂ ಸರದಿ ಸಾಲಿನಲ್ಲಿ ಬರುವುದಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿದ್ದು ಎಲ್ಲಾ ಭಕ್ತರು ಕೂಡ ಸಹಕರಿಸಿ ರಾಯರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು, ಈ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಂಡ ಭಕ್ತರು ಶ್ರೀ ಗುರುರಾಯರ ಆರಾಧನೆಯೋ ಎಂಬಂತೆ ಭಾಸವಾಗುತ್ತಿತ್ತು ಎಂದು ಸಂತೋಷವನ್ನು ವ್ಯಕ್ತಪಡಿಸುತ್ತಾ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು ಈ ಸಂದರ್ಭದಲ್ಲಿ ಗಣ್ಯರ ಆಗಮನ : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮಗ ಶ್ರೀ ಹೆಚ್. ಡಿ. ರೇವಣ್ಣ, ಚಲನಚಿತ್ರ ಕಲಾವಿದರುಗಳಾದ ಶ್ರೀ ದೀಪಕ್, ಶ್ರೀ ಕಿರಣ್ ಆರ್ಯನ್ ಮುಂತಾದ ಗಣ್ಯರು ಗುರುಗಳ ದರ್ಶನ ಪಡೆದರು.
Comments
Post a Comment