ಸಹಸ್ರಾರು ಶಿಷ್ಯ ಭಕ್ತರಿಗೆ "ತಪ್ತಮುದ್ರಾಧಾರಣೆ" ಶ್ರೀ ಸುಬುಧೇಂದ್ರ ಶ್ರೀಗಳಿಂದ

ಸಹಸ್ರಾರು ಶಿಷ್ಯ ಭಕ್ತರಿಗೆ "ತಪ್ತಮುದ್ರಾಧಾರಣೆ" ಶ್ರೀ  ಸುಬುಧೇಂದ್ರ ಶ್ರೀಗಳಿಂದ
ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬೆಳಗ್ಗೆ 6:30ಕ್ಕೆ ಶ್ರೀರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸುವರ್ಣದ ತೊಟ್ಟಿಲಿನಲ್ಲಿ ಶ್ರೀಮನ್ ಮೂಲ ರಾಮದೇವರಿಗೆ ಮಂಗಳಾರತಿಯನ್ನು ನೆರವೇರಿಸಿ ಸುದರ್ಶನ ಹೋಮದೊಂದಿಗೆ  ತಪ್ತಮುದ್ರಾಧಾರಣೆಯನ್ನು ತಾವು ಸ್ವೀಕರಿಸಿ, 35,000ಕ್ಕೂ ಮಿಗಿಲಾಗಿ ಸಹಸ್ರಾರು ಶಿಷ್ಯರಿಗೆ ಭಕ್ತರಿಗೆ ಬೆಳಗ್ಗೆ 7:30 ರಿಂದ ರಾತ್ರಿ 10:30ರವರೆಗೂ ಮುದ್ರಾಧಾರಣೆಯನ್ನು ನೆರವೇರಿಸಿದರು. ಬೆಳಗ್ಗೆಯಿಂದ ರಾತ್ರಿಯವರೆಗೆ ನಾಡಿನ ಪ್ರಖ್ಯಾತ ವಿದ್ವಾಂಸರುಗಳಿಂದ "ಅಖಂಡ ಭಾಗವತ" ಪ್ರವಚನ ಆಯೋಜಿಸಿತ್ತು. ಈ ಎಲ್ಲಾ ಕಾರ್ಯಕ್ರಮಗಳು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಮುದ್ರಾಧಾರಣೆ ಸ್ವೀಕರಿಸಲು ಆಗಮಿಸಿದ ಶಿಷ್ಯರಿಗಾಗಿ  ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಯೋವೃದ್ಧರಿಗೂ, ವಿಕಲಚೇತನರಿಗೂ ಪ್ರತ್ಯೇಕ ವ್ಯವಸ್ಥೆಯೂ ಮಾಡಲಾಗಿತ್ತು. ಈ ವ್ಯವಸ್ಥೆಯನ್ನು ಕಂಡ ಶಿಷ್ಯರು ಭಕ್ತರು ಸಂತೋಷವನ್ನು ವ್ಯಕ್ತಪಡಿಸುತ್ತಾ ಮುದ್ರಾಧಾರಣವನ್ನು  ಸ್ವೀಕರಿಸಿ, ಶ್ರೀ  ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಚಿತ್ರನಟಿ ತಾರಾ ಅನುರಾಧ ಮತ್ತು ಚಿತ್ರನಟಿ ಪ್ರೇಮಾರವರು ಚಿತ್ರನಟಿ ಸುಜಾತ ಅಕ್ಷಯ್ ರವರು ಕೂಡ ಮುದ್ರಾಧಾರಣವನ್ನು ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Comments

Popular posts from this blog

WROGN Opens Its New Flagship Store in Jayanagar, Bengaluru, Amidst Massive Fan Frenzy

Garci Opens Its Doors in Jayanagar

Unlock Your Career with OPAL-RT’s Real-Time Simulation Technologies