ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ
ಅಜ್ಜಿಯರ ಕಾಲದ ಹೆರಳು ಹಾಕುವ ಕ್ರಮವನ್ನೊಮ್ಮೆ ನೆನಪಿಸಿಕೊಳ್ಳಿ. ತಲೆಯ ಚರ್ಮಕ್ಕೆ, ಬೈತಲೆಗೆಲ್ಲ ಸರಿಯಾಗಿ ಎಣ್ಣೆ ಹಚ್ಚಿ, ತಲೆಯನ್ನು ಚೆನ್ನಾಗಿ ಬಾಚಿ (Hair Combing), ಕೂದಲಿನ ಸಿಕ್ಕು ಬಿಡಿಸಿ ನಂತರ ಹೆರಳು ಹಾಕುತ್ತಿದ್ದರು. ಹೀಗೆ ಜಡೆ ಹಾಕಿದರೆ ಮಾರನೇ ದಿನ ಆ ಹೊತ್ತಿನವರೆಗೆ ಹೆರಳು ಬಿಚ್ಚುತ್ತಿರಲಿಲ್ಲ, ಭದ್ರವಾಗಿ ಹಾಗೆಯೇ ಕುಳಿತಿರುತ್ತಿತ್ತು. ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ತಲೆ ಬಾಚುವುದೆಂದರೆ ಕೂಲಿನ ಸಿಕ್ಕು ಬಿಡಿಸಿ, ಕೇಶಗಳನ್ನು ವ್ಯವಸ್ಥಿತಗೊಳಿಸುವುದು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ಅದಷ್ಟೇ ಅಲ್ಲ, ತಲೆಯ ಚರ್ಮದ ಮತ್ತು ಕೂದಲುಗಳ ಬುಡದ ಆರೋಗ್ಯವನ್ನು ಕಾಪಾಡುವಲ್ಲಿನ ಅಗತ್ಯ ಕೆಲಸವಿದು. ತಲೆಯ ಚರ್ಮದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ತೈಲದ ಅಂಶವು ಕೂದಲಿನ ಸಹಜ ಕಂಡೀಶನರ್ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ದಿನವೂ ಅದನ್ನು ಕೂದಲಿನ ಎಲ್ಲೆಡೆ ಹರಡುವುದು ಮುಖ್ಯ. ಅದನ್ನು ಒಂದೆಡೆ ಹಾಗೆಯೇ ಉಳಿಯಲು ಬಿಟ್ಟರೆ ತಲೆಯ ಸೋಂಕಿಗೆ ಕಾರಣವಾಗಬಹುದು
Comments
Post a Comment